ಆಡಳಿತ • ಸೇವೆ • ಸಮುದಾಯ

ಸಂಸ್ಥೆಯ ಬಗ್ಗೆ

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಕಾಯ್ದೆಯಡಿ ನೋಂದಾಯಿಸಲಾಗಿದೆ.

ಇತಿಹಾಸ ಮತ್ತು ಬೆಳವಣಿಗೆ

ನಮ್ಮ ಸಂಸ್ಥೆಯು ಧೀಮಂತ ನಾಯಕರು ಹಾಗೂ ಮುಖ್ಯ ಪ್ರವರ್ತಕರಾದ ದಿ. ಕೆ. ವಸಂತ ಬಂಗೇರರವರ ಭದ್ರ ಅಡಿಪಾಯದೊಂದಿಗೆ ಆರಂಭವಾಯಿತು. ಸ್ಥಾಪಕ ಅಧ್ಯಕ್ಷರಾದ ದಿ. ಕೆ. ಜಿ. ಬಂಗೇರರವರ ಮಾರ್ಗದರ್ಶನ ಹಾಗೂ ಮಾಜಿ ಅಧ್ಯಕ್ಷರಾದ ದಿ. ಪದ್ಮನಾಭ ಮಾಣಿಂಜ ಇವರ ದೂರದೃಷ್ಟಿ ಮತ್ತು ಆದರ್ಶಗಳ ಅಡಿಯಲ್ಲಿ ಸಂಸ್ಥೆಯು ನಿರಂತರವಾಗಿ ಬೆಳೆದು ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.

ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿದ್ದ ಸಂಸ್ಥೆ ನಂತರ ಉಡುಪಿ ಜಿಲ್ಲೆಗೂ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ. ಪ್ರಸ್ತುತ ಬೆಳ್ತಂಗಡಿ, ಶಿರ್ತಾಡಿ, ಕಲ್ಲಡ್ಕ, ಕಕ್ಕಿಂಜೆ, ಬೆಳುವಾಯಿ, ನೆಲ್ಯಾಡಿ, ಮುಡಿಪು, ವೇಣೂರು, ಉಪ್ಪಿನಂಗಡಿ, ಕಡಬ, ಬ್ರಹ್ಮಾವರ, ಹಳೆಯಂಗಡಿ, ಕುಪ್ಪೆಪದವು, ಬಜಗೋಳಿ, ಅರಸಿನಮಕ್ಕಿ, ಸಿದ್ದಕಟ್ಟೆ, ಅಜೆಕಾರು, ಹಿರಿಯಡ್ಕ, ಪಡೀಲ್, ಕಬಕ, ಹೊಸ್ಮಾರು, ಪುರುಷರಕಟ್ಟೆ, ಕುಂಬ್ರ, ವಾಮದಪದವು, ಮಾವಿನಕಟ್ಟೆ, ಮೂಡಬಿದಿರೆ, ಆಲಂಕಾರು ಮತ್ತು ಗುರುಪುರ-ಕೈಕಂಬ ಸೇರಿ 28 ಶಾಖೆಗಳನ್ನು ಹೊಂದಿದೆ.

ಎಲ್ಲಾ ಶಾಖೆಗಳಲ್ಲಿ ಸಿಸಿ ಟಿವಿ, ಅಲಾರಂ, ಬೆಂಕಿ ನಿಯಂತ್ರಣ ಸಾಧನಗಳು, ಭದ್ರತಾ ಕೊಠಡಿ ಮತ್ತು ಭದ್ರತಾ ಕೋಶಗಳಿಗೆ ಆದ್ಯತೆ ನೀಡಲಾಗಿದೆ. ಕೋರ್ ಬ್ಯಾಂಕಿಂಗ್ ಮತ್ತು ಸ್ವಂತ IFSC ಕೋಡ್ ಮೂಲಕ ನೇರ ಹಣ ವರ್ಗಾವಣೆ ಸೇರಿದಂತೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದೆ.

ಆಡಳಿತ ಮತ್ತು ಕಾರ್ಯಾಚರಣೆ

ಆಡಳಿತ ಮಂಡಳಿ

16 ಸದಸ್ಯರ ಆಡಳಿತ ಮಂಡಳಿಯು ವರದಿ ವರ್ಷದಲ್ಲಿ 16 ಬಾರಿ ಸಭೆ ಸೇರಿದೆ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸಭಾ ಭತ್ಯೆಯನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿ ನೀಡುತ್ತಾರೆ.

ಸಾಲ ವಸೂಲಾತಿ ಮತ್ತು ಆಂತರಿಕ ಲೆಕ್ಕಪರಿಶೋಧನೆ

ಸಾಲ ವಸೂಲಾತಿ ವಿಭಾಗ, ಆಂತರಿಕ ಲೆಕ್ಕಪರಿಶೋಧನಾ ವಿಭಾಗ ಮತ್ತು ಮಾನವ ಸಂಪನ್ಮೂಲ ವಿಭಾಗವು ಮರುಪಾವತಿ, ಗುಣಮಟ್ಟದ ಸಾಲ ವಿತರಣೆ, ಮೇಲ್ವಿಚಾರಣೆ ಮತ್ತು ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತವೆ.

ಆಡಳಿತ ಮಂಡಳಿ

ಒದಗಿಸಲಾದ ಮಾಹಿತಿಯ ಆಧಾರದ ಮೇಲೆ ಆಡಳಿತ ಮಂಡಳಿ ಮತ್ತು ಕಾರ್ಯನಿರ್ವಾಹಕ ನಾಯಕತ್ವದ ವಿವರಗಳು.

ಶ್ರೀ ಭಗೀರಥ ಜಿ

ಶ್ರೀ ಭಗೀರಥ ಜಿ

ಹುದ್ದೆ: ಅಧ್ಯಕ್ಷರು

ಃಂ. ಐಐಃ ಬೆಳ್ತಂಗಡಿ ತಾಲೂಕಿನ ಪ್ರತಿಷ್ಟಿತ ಗುಂಪೋಲಿ ಮನೆತನದ ಶ್ರೀ ಭಗೀರಥ.ಜಿ ವೃತ್ತಿಯಲ್ಲಿ ನೋಟರಿ ವಕೀಲರು ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.)ದ ಸ್ಥಾಪನೆಗೆ ಕಾರಣಿಕರ್ತರಾಗಿರುತ್ತಾರೆ.ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ(ರಿ) ಬೆಳ್ತಂಗಡಿ ಇಲ್ಲಿನ ಮಾಜಿ ಅಧ್ಯಕ್ಷರಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಗುರುವಾಯನಕೆರೆ ಪ್ರಾಥಮಿಕ ಸೇವಾ ಸಹಕಾರಿ ಸಂಘ (ನಿ.) ಇಲ್ಲಿ ಸತತ ೨೬ ವರ್ಷಗಳವರೆಗೆ ಅಧ್ಯಕ್ಷರಾಗಿ ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ಯಾಡಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಪ್ರಮುಖ ಕಾರಣಿಕರ್ತರಾಗಿರುತ್ತಾರೆ. ಪ್ರಸ್ತುತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಆಶಾ ಕಿರಣವಾದ ಶ್ರೀ ಗುರುದೇವ ಟ್ರಸ್ಟ್ ನ ಸ್ಥಾಪನೆಯ ರೂವರಿಯಾಗಿದ್ದು, ಪ್ರಸ್ತುತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಷ್ಟಿತ ಮುಗ್ಗ ಕುಟುಂಬಸ್ಥರ ಟ್ರಸ್ಟ್ ಇಲ್ಲಿನ ಕಾರ್ಯದರ್ಶಿಯಾಗಿ, ನಾಗಬ್ರಹ್ಮ ದೇವಸ್ಥಾನ ಮೇಲಂತಬೆಟ್ಟು ಇಲ್ಲಿನ ಆಡಳಿತ ಮೊಕ್ತೇಸರರಾಗಿ, ಕೃಷಿಕ ಸಮಾಜ ಬೆಳ್ತಂಗಡಿ ಇಲ್ಲಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು , ಬೆಳ್ತಂಗಡಿಯ ಜನಪ್ರೀಯ ಶಾಸಕರಾಗಿದ್ದ ಶ್ರೀ ವಸಂತ ಬಂಗೇರರವರ ನಿಕಟ ವರ್ತಿಯಾಗಿ, ತಾಲೂಕು ಪಂಚಾಯತ್ ಬೆಳ್ತಂಗಡಿ ಇಲ್ಲಿನ ಮಾಜಿ ಉಪಾಧ್ಯಕ್ಷರಾಗಿ ಮಂಡಲ ಪಂಚಾಯತ್ ಇಲ್ಲಿನ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಆರ್ಥೀಕವಾಗಿ ಹಿಂದುಳಿದ ಜನಸಾಮ್ಯಾನರಿಗೆ ಬ್ಯಾಂಕಿಂಗ್ ಸೇವೆಯನ್ನು ಒದಗಿಸಬೇಕನ್ನುವ ಮಹತ್ವಕಾಂಕ್ಷೆ ಇಟ್ಟುಕೊಂಡು ಸಂಘದ ಮುಖ್ಯ ಪ್ರವರ್ತಕರಾದ ಶ್ರೀ ಕೆ ವಸಂತ ಬಂಗೇರ ಸ್ಥಾಪಕ ಅಧ್ಯಕ್ಷರಾದ ಕೆ.ಜಿ ಬಂಗೇರ , ಮಾಜಿ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ ಇವರೊಂದಿಗೆ ಶ್ರೀ ಗುರುದೇವ ವಿವಿಧೋದ್ದೇಶ ಸಂಘವನ್ನು ಪ್ರಾರಂಭಿಸಿರುತ್ತಾರೆ.

ಶ್ರೀ ಜಗದೀಶ್ಚಂದ್ರ ಡಿ.ಕೆ

ಶ್ರೀ ಜಗದೀಶ್ಚಂದ್ರ ಡಿ.ಕೆ

ಹುದ್ದೆ: ಉಪಾಧ್ಯಕ್ಷರು

ಶಿಕ್ಷಣ ಕಾಶಿ ಮೂಡಬಿದ್ರೆಯ ಶ್ರೀ ಜಗದೀಶ್ಚಂದ್ರ ಡಿ.ಕೆ ಸಾಮಾಜಿಕ, ಶೈಕ್ಷಣಿಕ ಮತ್ತು ಸೇವಾ ರಂಗಗಳಲ್ಲಿ ಸುದೀರ್ಘ ಹಾಗೂ ಅಪಾರ ಅನುಭವ ಹೊಂದಿರುತ್ತಾರೆ. ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯಲ್ಲಿ ಮಾಜಿ ಪ್ರಾಂತೀಯ ಅಧ್ಯಕ್ಷರು ಹಾಗೂ ಜಿಲ್ಲಾ ಸಂಯೋಜಕರಾಗಿ ಯಶಸ್ವಿ ಸೇವೆ ಸಲ್ಲಿಸಿದ್ದು, ಮಂಗಳೂರಿನ ಪ್ರತಿಷ್ಟಿತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮೂಡಬಿದಿರೆ ಘಟಕದ ಮಾಜಿ ಅಧ್ಯಕ್ಷರಾಗಿ ಗಣನೀಯ ಕೊಡುಗೆ ನೀಡಿದ್ದಾರೆ. ಪ್ರಸ್ತುತ ವೇಣೂರಿನ ಪಲ್ಗುಣಿ ಸೇವಾ ಸಂಘದ ಕೋಶಾಧಿಕಾರಿಯಾಗಿ ಮತ್ತು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ ಇದರ ಕಾರ್ಯಕಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯರಾಗಿರುತ್ತಾರೆ. ಇದರೊಂದಿಗೆ ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಶಿಕ್ಷಣ ಕ್ಷೇತ್ರದಲ್ಲೂ ತಮ್ಮ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಶ್ರೀಮತಿ ಸುಜೀತಾ ವಿ.ಬಂಗೇರ

ಶ್ರೀಮತಿ ಸುಜೀತಾ ವಿ.ಬಂಗೇರ

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕಿನ ಮಾಜಿ ಜನಪ್ರೀಯ ಶಾಸಕರಾಗಿದ್ದ ದಿ. ಕೆ ವಸಂತ ಬಂಗೇರರವರ ಧರ್ಮಪತ್ನಿಯಾಗಿ ವಸಂತ ಬಂಗೇರರವರ ಸೇವಾ ಕೈಂಕರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಸಾಮಾಜಿಕ, ಶೈಕ್ಷಣಿಕ, ಸಹಕಾರ ಕ್ಷೇತ್ರ ಹಾಗೂ ಮಹಿಳಾ ಸಬಲೀಕರಣ ಸಕ್ರಿಯವಾಗಿ ತೊಡಗಿಕೊಂಡಿರುವ ಹಿರಿಯ ನಾಯಕಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ್ (ಮಂಗಳೂರು) ನ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿ ಸ್ಥಾಪಕ ಅಧ್ಯಕ್ಷೆ ಹಾಗೂ ಪ್ರಸ್ತುತ ನಿರ್ದೇಶಕಿಯಾಗಿರುತ್ತಾರೆ. ಗುರುವಾಯನಕೆರೆಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಬೆಳ್ತಂಗಡಿಯ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುತ್ತಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲೂ ಕೊಡುಗೆ ನೀಡುತ್ತಿದ್ದು, ಬೆಳ್ತಂಗಡಿಯ ಶ್ರೀ ಗುರುದೇವ ಎಜುಕೇಷನ್ ಟ್ರಸ್ಟ್ನ ಗೌರವ ಅಧ್ಯಕ್ಷೆ ಹಾಗೂ ಟ್ರಸ್ಟಿಯಾಗಿ, ಕನ್ಯಾಡಿಯ ಶ್ರೀ ರಾಮ ಕ್ಷೇತ್ರದ ಟ್ರಸ್ಟಿಯಾಗಿ ಮತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಹಿತ್ತಿಲುವಿನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಮಂಗಳೂರು ಜಿಲ್ಲಾ ಮಹಿಳಾ ವೇದಿಕೆ, ಬೆಳ್ತಂಗಡಿ ತಾಲೂಕು ಮಹಿಳಾ ವೇದಿಕೆ ಮತ್ತು ಮಹಿಳಾ ವೃಂದದ ಅಧ್ಯಕ್ಷೆಯಾಗಿ, ಹಾಗೂ ಗುರುವಾಯನಕೆರೆ ಸೇವಾ ಸಹಕಾರಿ ಸಂಘದ ಹಾಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ತನುಜಾ ಶೇಖರ್

ಶ್ರೀಮತಿ ತನುಜಾ ಶೇಖರ್

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿವಾಸಿಯಾಗಿದ್ದು, ಸ್ಥಳೀಯ ಆಡಳಿತ, ಸಹಕಾರ ಕ್ಷೇತ್ರ ಹಾಗೂ ಸಾಮಾಜಿಕ ರಂಗಗಳಲ್ಲಿ ದೀರ್ಘಕಾಲದ ಸೇವೆಯನ್ನು ಸಲ್ಲಿಸಿರುತ್ತಾರೆ. ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮಾಜಿ ಉಪಾಧ್ಯಕ್ಷೆಯಾಗಿ ಹಾಗೂ ಇಂದಬೆಟ್ಟು ಗ್ರಾಮ ಪಂಚಾಯತ್‌ನ ಸದಸ್ಯೆಯಾಗಿ ಜನಸೇವೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಹಕಾರ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು ಬಂಗಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿಯಾಗಿ, ನಾವೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಿಯಾಗಿ ಹಾಗೂ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಳ್ತಂಗಡಿ(PLD Bank) ನ ಮಾಜಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಇದರೊಂದಿಗೆ ಬಿಲ್ಲವ ಮಹಿಳಾ ವೇದಿಕೆಯ ಮಾಜಿ ಅಧ್ಯಕ್ಷೆಯಾಗಿ, ಇಂದಬೆಟ್ಟು - ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿಯಾಗಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಾರೆ.

ಶ್ರೀ ಚಂದ್ರಶೇಖರ

ಶ್ರೀ ಚಂದ್ರಶೇಖರ

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕಿನ ಮಾಲಾಡಿ ಶಿವಗಿರಿ ನಿವಾಸ ಶ್ರೀ ಚಂದ್ರಶೇಖರ್ ಉದ್ಯಮಗಳಾಗಿರುತ್ತಾರೆ. ಉದ್ಯಮ ಕ್ಷೇತ್ರದಲ್ಲಿ ಬೆಳ್ತಂಗಡಿ ತಾಲೂಕಿನ ಪಿಲ್ಯ ಎಂಬಲ್ಲಿ 'ಹೊಟೇಲ್ ದೇವರಾಜ್ ಬೋರ್ಡಿಂಗ್ & ಲಾಡ್ಜಿಂಗ್'ನ ಆಡಳಿತ ಪಾಲುದಾರರಾಗಿ ಹಾಗೂ ಸೋಣಂದೂರಿನ 'ಲಕ್ಷ್ಮೀ ಸ್ಕçಬರ್ ಹೋಮ್ ಇಂಡಸ್ಟಿçÃ'ಯ ಮಾಲಕರಾಗಿರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಕೊಂಡಿರುವ ಇವರು, ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕರಾಗಿ ಹಾಗೂ ಕುವೆಟ್ಟು -ಓಡಿಲ್ನಾಳ ಘಟಕದ ಮಾಜಿ ಅಧ್ಯಕ್ಷರಾಗಿ ಸಂಘಟನೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಪ್ರಸ್ತುತ ಮದ್ದಡ್ಕದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ.

ಶ್ರೀ ಸಂಜೀವ ಪೂಜಾರಿ

ಶ್ರೀ ಸಂಜೀವ ಪೂಜಾರಿ

ಹುದ್ದೆ: ನಿರ್ದೇಶಕರು

ಬಂಟ್ವಾಳ ತಾಲೂಕಿನ ಗಾಣದಪಟ್ಪು ಗುರುಕೃಪಾ ನಿವಾಸ ಶ್ರೀ ಸಂಜೀವ ಪೂಜಾರಿ ಇವರು ಉದ್ಯಮಿಗಳಾಗಿದ್ದು, ಗುರುಕೃಪಾ ಪೆಟ್ರೋಲ್ ಬಂಕ್, ಪೇಟ್ರೋಲಿಯಂ ಪೂರೈಕೆದಾರರು, ಗ್ಯಾಸ್ ವಿತರಕ ಉದ್ಯಮಿಗಳಾಗಿರುತ್ತಾರೆ. ಬಂಟ್ವಾಳದ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಬಂಟ್ವಾಳ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಪೆಟ್ರೋಲಿಯಂ ಡೀರ‍್ಸ್ ಅಸೋಸಿಯೇಷನ್‌ನ ಕೋಶಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ತಮ್ಮನ್ನು ತೊಡಗಿಕೊಂಡಿರುವ ಇವರು, ಬಾಚಕೆರೆಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾಗಿ ಹಾಗೂ ಬಿ.ಸಿ. ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಉಪಾಧ್ಯಕ್ಷರಾಗಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಶ್ರೀ ಕೆ.ಪಿ ದಿವಾಕರ

ಶ್ರೀ ಕೆ.ಪಿ ದಿವಾಕರ

ಹುದ್ದೆ: ನಿರ್ದೇಶಕರು

ಪುತ್ತೂರು ತಾಲೂಕಿನ ಆರ್ಯಾಪು ಅಪೂರ್ವ ಲೇಔಟ್ ನ ಶ್ರೀ ಕೆ.ಪಿ ದಿವಾಕರ ಅರಣ್ಯ ಇಲಾಖೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ (DCF) ಸುದೀರ್ಘಕಾಲದ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಅಧಿಕಾರಿಯಾಗಿದ್ದಾರೆ. ತಮ್ಮ ಸರ್ಕಾರಿ ಸೇವೆಯೊಂದಿಗೆ ಸಾಮಾಜಿಕ ರಂಗದಲ್ಲೂ ಸಕ್ರಿಯರಾಗಿರುವ ಇವರು, ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ ಹಾಗೂ ರೋಟರಿ ಕ್ಲಬ್ ಪುತ್ತೂರಿನ ಮಾಜಿ ಸದಸ್ಯರಾಗಿರುತ್ತಾರೆ. ಪ್ರಸ್ತುತ 'ದಿ ಪುತ್ತೂರು ಕ್ಲಭ್' ನ ಕೋಶಾಧಿಕಾರಿಯಾಗಿ ಮತ್ತು ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘ ಪುತ್ತೂರು ಇಲ್ಲಿನ ಮಾಜಿ ಅಧ್ಯಕ್ಷರಾಗಿ ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.

ಶ್ರೀ ಧರ್ಣಪ್ಪ ಪೂಜಾರಿ

ಶ್ರೀ ಧರ್ಣಪ್ಪ ಪೂಜಾರಿ

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕು ಬಳಂಜ, ನಾಲ್ಕೂರು ಗ್ರಾಮದ ಸಂಧ್ಯಾದೀಪ ನಿವಾಸದ ಶ್ರೀ ಧರ್ಣಪ್ಪ ಪೂಜಾರಿ ಇವರು ಪ್ರಗತಿಪರ ಕೃಷಿಕರಾಗಿದ್ದು, ಸ್ಥಳೀಯ ಆಡಳಿತ, ಸಹಕಾರ ಕ್ಷೇತ್ರ ಹಾಗೂ ಸಾಮಾಜಿಕ ರಂಗಗಳಲ್ಲಿ ಸುದೀರ್ಘ ಸೇವೆಯನ್ನಿತ್ತ ಹಿರಿಯ ಧುರೀಣರಾಗಿದ್ದಾರೆ. ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯರಾಗಿ , ಅಳದಂಗಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿ ಹಾಗೂ ಬಳಂಜದ ಸರಕಾರಿ ಉನ್ನತಿಕರಿಸಿದ ಹಿ.ಪ್ರಾ, ಶಾಲಾಭಿವೃದ್ದಿ ಸಮಿತಿಯ (SDMC) ಮಾಜಿ ಅಧ್ಯಕ್ಷರಾಗಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸಾಮಾಜಿಕ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ಇವರು ಬಳಂಜ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾಗಿ ಹಾಗೂ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬಳಂಜದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಧರಣೇಂದ್ರ ಕುಮಾರ್

ಶ್ರೀ ಧರಣೇಂದ್ರ ಕುಮಾರ್

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಬಜೆ ಮನೆ ಶ್ರೀ ಧರಣೇಂದ್ರ ಕುಮಾರ್ ಉದ್ಯಮ ರಂಗದಲ್ಲಿ ಹೊಸಂಗಡಿಯ 'ಶ್ರೀ ಗುರುದೇವ ಹಾರ್ಡ್ವೇರ್'ನ ಮಾಲಕರಾಗಿರುತ್ತಾರೆ. ಜನಪ್ರತಿನಿಧಿಯಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಇವರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾಗಿ, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಮಾಜಿ ಅಧ್ಯಕ್ಷರಾಗಿ, ಜಿಲ್ಲಾ KDP ಸಮಿತಿಯ ಮಾಜಿ ಸದಸ್ಯರಾಗಿ ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮಾಜಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸ್ಥಾಪಕ ರಂಗದಲ್ಲಿ ಜಿಲ್ಲಾ ಕಾಂಗ್ರೇಸ್ ಇತರ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷರಾಗಿ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ , ಪ್ರಸ್ತುತ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಜಯವಿಕ್ರಮ್ ಪಿ

ಶ್ರೀ ಜಯವಿಕ್ರಮ್ ಪಿ

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕಲ್ಲಾಪು ಮನೆ ಶ್ರೀ ಜಯವಿಕ್ರಮ್ ಪಿ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಹಾಗೂ ಕರಾಯ ಮೂರ್ತೆದಾರರ ಸೇವಾ ಸಂಘದ ಅಧ್ಯಕ್ಷರಾಗಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ತಣ್ಣೀರುಪಂತ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರಾಗಿ ಜನಸೇವೆ ಸಲ್ಲಿಸಿರುವ ಇವರು, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತು ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರೊಂದಿಗೆ ಮೂಲ್ಕಿಯ ರಾಷ್ಟೀಯ ಬಿಲ್ಲವರ ಮಹಾಮಂಡಲದ ನಿರ್ದೇಶಕರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಜೊತೆ ಕಾರ್ಯದರ್ಶಿಯಾಗಿ, ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಹಾಗೂ ಹೊಸಂಗಡಿ ಫ್ರೆಂಡ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.

ಶ್ರೀ ಆನಂದ ಪೂಜಾರಿ

ಶ್ರೀ ಆನಂದ ಪೂಜಾರಿ

ಹುದ್ದೆ: ನಿರ್ದೇಶಕರು

ಪುತ್ತೂರು ತಾಲೂಕು ಸರ್ವೆಧೋಳ ಗ್ರಾಮದ ಆನಂದ ಸದನ ಶ್ರೀ ಆನಂದ ಪೂಜಾರಿ ಪುತ್ತೂರಿನ ಬನ್ನೂರು ರೈತರ ಸೇವಾ ಸಹಕಾರ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ (CEO) ದಕ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು, ಪ್ರಸ್ತುತ ಪುತ್ತೂರಿನ ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಹಾಗೂ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸಹಕಾರ ಕ್ಷೇತ್ರದಲ್ಲಿ ತಮ್ಮ ಮಾರ್ಗದರ್ಶನವನ್ನು ಮುಂದುವರಿಸಿದ್ದಾರೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲೂ ಸಕ್ರಿಯರಾಗಿರುವ ಇವರು ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ, ಹಾಗೂ ಭಕ್ತಕೋಡಿಯ ಶ್ರೀರಾಮ ಭಜನಾ ಮಂಡಳಿ ಮತ್ತು ಶ್ರೀ ರಾಮ ಯಕ್ಷಗಾನ ಕಲಾ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ರಾಜಾರಾಮ ಕೆ.ಬಿ

ಡಾ. ರಾಜಾರಾಮ ಕೆ.ಬಿ BDS

ಹುದ್ದೆ: ನಿರ್ದೇಶಕರು

ಃಆS, ಆeಟಿಣಚಿಟ Suಡಿgeoಟಿ ಬಂಟ್ವಾಳ ತಾಲೂಕು ಕೋಂಗುಜೆ ಗ್ರಾಮದ ರಾಮ ನಿವಾಸ ಡಾ. ರಾಜಾರಾಮ ಕೆ.ಬಿ ಇವರು ಉಪ್ಪಿನಂಗಡಿಯ ಗಿರಿಜ ದಂತ ಚಿಕಿತ್ಸಾಲಯದ ಖ್ಯಾತ ದಂತ ವೈದ್ಯರು, ಸಾಮಾಜಿಕ ಧುರೀಣರಾಗಿರುವ ಇವರು ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ವೈದ್ಯಕೀಯ ರಂಗದಲ್ಲಿ ಪುತ್ತೂರು ಇಂಡಿಯನ್ ಡೆಂಟಲ್ ಅಸೋಸಿಯೇಷನ್‌ನ (IDA) ಮಾಜಿ ಅಧ್ಯಕ್ಷರಾಗಿ ಹಾಗೂ ಡೆಂಟಲ್ ಅಸೋಸಿಯೇಷನ್ ಟ್ರಸ್ಟ್ನ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ರೋಟರಿ ಜಿಲ್ಲೆ ೩೧೮೧ರ ಅಸಿಸ್ಟೆಂಟ್ ಗವರ್ನರ್ ಆಗಿ, ರೋಟರಿ ಕ್ಲಬ್ ಉಪ್ಪಿನಂಗಡಿಯ ಮಾಜಿ ಅಧ್ಯಕ್ಷರಾಗಿ, ಜೆ.ಸಿ.ಐ ಉಪ್ಪಿನಂಗಡಿಯ ಮಾಜಿ ಅಧ್ಯಕ್ಷರಾಗಿ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾಗಿ ಹಾಗೂ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷರಾಗಿ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲೂ ತೊಡಗಿಕೊಂಡಿರುವ ಇವರು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಸಮಿತಿಯ ಮಾಜಿ ಟ್ರಸ್ಟಿಯಾಗಿ ಹಾಗೂ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ದಿ ಸಮಿತಿಯ (CDC) ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀ ಗಂಗಾಧರ ಮಿತ್ತಮಾರು

ಶ್ರೀ ಗಂಗಾಧರ ಮಿತ್ತಮಾರು

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕು ಸುಲ್ಕೇರಿಮೋಗ್ರು ಗ್ರಾಮ ಮಿತ್ತಮಾರು ಮನೆ ಶ್ರೀ ಗಂಗಾಧರ ಮಿತ್ತಮಾರು ಇವರು ಪ್ರಗತಿಪರ ಕೃಷಿಕರಾಗಿದ್ದು, ಬೆಳ್ತಂಗಡಿಯ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ , ಅಳದಂಗಡಿಯ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ರಂಗದಲ್ಲಿ ಸಕ್ರಿಯ ಕೊಡುಗೆ ನೀಡುತ್ತಿರುವ ಇವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (SDM) ಎಜುಕೇಷನಲ್ ಸೊಸೈಟಿ ಹಾಗೂ ಧಾರವಾಡದ ಜನತಾ ಶಿಕ್ಷಣ ಸಮಿತಿಯ (JSS) ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹಕಾರ ಹಾಗೂ ಸಾರ್ವಜನಿಕ ರಂಗದಲ್ಲಿ ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಮಾಜಿ ಉಪಾಧ್ಯಕ್ಷರಾಗಿ ಹಾಗೂ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ನ ಮಾಜಿ ನಿರ್ದೇಶಕರಾಗಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಶ್ರೀ ರಕ್ಷಿತ್ ಶಿವರಾಮ್

ಶ್ರೀ ರಕ್ಷಿತ್ ಶಿವರಾಮ್

ಹುದ್ದೆ: ನಿರ್ದೇಶಕರು

ಇವರು ರಾಜ್ಯ ರಾಜಕೀಯ ರಂಗದಲ್ಲಿ ಪ್ರಮುಖ ಸಂಸ್ಥಾಪಕ ನಾಯಕರಾಗಿದ್ದು, ಪ್ರಸ್ತುತ ಕರ್ಣಾಟಕ ಪ್ರದೇಶಿಕ ಕಾಂಗ್ರೇಸ್ ಸಮಿತಿಯ (KPCC) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರ ಸಬಲೀಕರಣ ಹಾಗೂ ರಾಜ್ಯಮಟ್ಟದ ಸಾರ್ವಜನಿಕ ಧ್ವನಿಯಾಗಿ ಕಾರ್ಯನಿರ್ವಹಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಶ್ರೀ ಚಿದಾನಂದ ಪೂಜಾರಿ

ಶ್ರೀ ಚಿದಾನಂದ ಪೂಜಾರಿ B.Sc.

ಹುದ್ದೆ: ನಿರ್ದೇಶಕರು

ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಎಲ್ದಕ್ಕ ಮನೆ ಶ್ರೀ ಚಿದಾನಂದ ಪೂಜಾರಿ ಇವರು ಪ್ರಗತಿಪರ ಕೃಷಿಕರಾಗಿದ್ದು, ಶಿರ್ಲಾಲು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿರುವ ಇವರು, ಪ್ರಸ್ತುತ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗೌರವ ಅಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸಾರ್ವಜನಿಕ ಮತ್ತು ಸ್ಥಳೀಯ ಆಡಳಿತ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (APMC) ಮಾಜಿ ಅಧ್ಯಕ್ಷರಾಗಿ, ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ, ಅಳದಂಗಡಿ ಮಂಡಲ ಪಂಚಾಯತ್‌ನ ಮಾಜಿ ಸದಸ್ಯರಾಗಿ ಹಾಗೂ ಶಿರ್ಲಾಲು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. ಇದರೊಂದಿಗೆ ಸುಲ್ಕೇರಿಮೊಗ್ರು ವ್ಯವಸಾಯಿಕ ಸೇವಾ ಸಹಕಾರ ಸಂಘದ ಮಾಜಿ ನಿರ್ದೇಶಕರಾಗಿ ಸಹಕಾರ ರಂಗದಲ್ಲೂ ಕೊಡುಗೆ ನೀಡಿದ್ದಾರೆ.

ಶ್ರೀ ಸೂರಜ್ ಕುಮಾರ್

ಶ್ರೀ ಸೂರಜ್ ಕುಮಾರ್

ಹುದ್ದೆ: ನಿರ್ದೇಶಕರು

ಸೂರಜ್ ಕುಮಾರ್ ಅವರು ಸುಮಾರು ಮೂರು ದಶಕಗಳ ಅನುಭವ ಹೊಂದಿರುವ ಉದ್ಯಮಿ, ವಾಸ್ತುಶಿಲ್ಪಿ ಹಾಗೂ ವ್ಯವಹಾರ ನಾಯಕರು. ಆರ್‌ಸಿ ಆರ್ಕಿಟೆಕ್ಚರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಹಾಗೂ ವಿನ್ಯಾಸ ನಿರ್ದೇಶಕರಾಗಿ, ಅವರು ಭಾರತದಾದ್ಯಂತ ಅನೇಕ ಪ್ರಮುಖ ಬಹುರಾಷ್ಟ್ರೀಯ ಸಂಸ್ಥೆಗಳ ಪ್ರತಿಷ್ಠಿತ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, ನವೀನತೆ, ಗುಣಮಟ್ಟ ಹಾಗೂ ಗ್ರಾಹಕರ ವಿಶ್ವಾಸಕ್ಕೆ ಹೆಸರುವಾಸಿಯಾಗಿದ್ದಾರೆ.

ಮಂಗಳೂರಿನಲ್ಲಿ ಜನಿಸಿ ಬೆಳೆದಿರುವ ಅವರು, ಬೆಳ್ತಂಗಡಿ ಪ್ರದೇಶದೊಂದಿಗೆ ಆಳವಾದ ಕುಟುಂಬ ಬಾಂಧವ್ಯವನ್ನು ಹೊಂದಿದ್ದಾರೆ. ತಮ್ಮನ್ನು ರೂಪಿಸಿದ ಸಮಾಜಕ್ಕೆ ಮರಳಿ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯವೆಂದು ಅವರು ನಂಬಿದ್ದಾರೆ. ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.)ದೊಂದಿಗೆ ಅವರ ಸಂಬಂಧವು ಕೇವಲ ಜವಾಬ್ದಾರಿಯಲ್ಲ, ಅದು ಅವರಿಗೆ ಹೆಮ್ಮೆಯ ವಿಷಯವೂ ಆಗಿದೆ.

ಅವರ ದಿವಂಗತ ತಂದೆಯಾದ ಶ್ರೀ ಎನ್. ಪದ್ಮನಾಭ ಅವರು ಹಲವು ವರ್ಷಗಳ ಕಾಲ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಆರಂಭಿಕ ಹಂತದಿಂದಲೇ ಅದನ್ನು ಇಂದಿನ ವಿಶ್ವಾಸಾರ್ಹ ಮತ್ತು ಪ್ರಗತಿಶೀಲ ಸಂಸ್ಥೆಯಾಗಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅವರ ದೂರದೃಷ್ಟಿ, ಪ್ರಾಮಾಣಿಕತೆ ಹಾಗೂ ಸಮಾಜಸೇವೆಯ ಮನೋಭಾವದಿಂದ ಪ್ರೇರಿತರಾದ ಸೂರಜ್ ಕುಮಾರ್ ಅವರು ಆ ಪರಂಪರೆಯನ್ನು ಮುಂದುವರಿಸುವ ಸಂಕಲ್ಪ ಹೊಂದಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರಾಗಿ, ಉತ್ತಮ ಆಡಳಿತ, ನವೀನ ಚಿಂತನೆ ಹಾಗೂ ಜವಾಬ್ದಾರಿಯುತ ನಾಯಕತ್ವದ ಮೂಲಕ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಅದರ ಮೂಲ ಮೌಲ್ಯಗಳಾದ ವಿಶ್ವಾಸ, ಪಾರದರ್ಶಕತೆ ಮತ್ತು ಸೇವಾ ಮನೋಭಾವವನ್ನು ಮುಂದಿನ ಪೀಳಿಗೆಗಳಿಗೂ ಉಳಿಸಿ ಬೆಳೆಸಲು ಅವರು ಬದ್ಧರಾಗಿದ್ದಾರೆ. ವ್ಯಕ್ತಿಗಳು, ಉದ್ಯಮಗಳು ಹಾಗೂ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ನೆರವಾಗಿ, ಸಂಸ್ಥೆಯ ಸುಸ್ಥಿರ ಬೆಳವಣಿಗೆಗೆ ತಮ್ಮ ಕೊಡುಗೆ ನೀಡುವುದು ಅವರ ಧ್ಯೇಯವಾಗಿದೆ.

ಶ್ರೀ ಮೋನಪ್ಪ ಪೂಜಾರಿ

ಶ್ರೀ ಮೋನಪ್ಪ ಪೂಜಾರಿ

ಹುದ್ದೆ: ವಿಶೇಷಾಧಿಕಾರಿ

ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಕಂಡೆತ್ಯಾರು ಶ್ರೀ ಮೋನಪ್ಪ ಪೂಜಾರಿ ಪ್ರತಿಷ್ಠಿತ ರಾಷ್ಟೀಯ ಸಹಕಾರಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಸಹಕಾರ ಕ್ಷೇತ್ರ, ಗ್ರಾಮೀಣಾಭಿವೃದ್ದಿ, ಧಾರ್ಮಿಕ ಹಾಗೂ ಸಾಮಾಜಿಕ ರಂಗಗಳಲ್ಲಿ ಸುದೀರ್ಘಕಾಲದ ಅನುಭವ ಹೊಂದಿರುತ್ತಾರೆ. ಕಜೆಕಾರು ವ್ಯವಸಾಯಿಕ ಸೇವಾ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ (CEO) ಹಾಗೂ ಮಾಜಿ ಅಧ್ಯಕ್ಷರಾಗಿ, ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.)ದ ಮಾಜಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆಗಿ ಸಹಕಾರ ಕ್ಷೇತ್ರದಲ್ಲಿ ದಕ್ಷ ಸೇವೆ ಸಲ್ಲಿಸಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ (DCC) ಬ್ಯಾಂಕ್ ವತಿಯಿಂದ ಇಸ್ರೇಲ್ ಪ್ರವಾಸ ಕೈಗೊಂಡ ಸಹಕಾರಿ ನಿಯೋಗದ ಪ್ರತಿನಿಧಿಯಾಗಿರುತ್ತಾರೆ. ಪ್ರಸ್ತುತ ಮಡವು ಶ್ರೀ ಬಾಲಸುಬ್ರಹ್ಮ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ, ಮಡಂತ್ಯಾರು ರೋಟರಿ ಕ್ಲಬ್‌ನ ಸ್ಥಾಪಕ ಅಧ್ಯಕ್ಷ ಹಾಗೂ ಜೋನಲ್ ಲೆಪ್ಟಿಲÉಂಟ್ ಅಧಿಕಾರಿಯಾಗಿ, ಮಡಂತ್ಯಾರರಿನ ಸೆಕ್ರೇಟ್ ಹಾರ್ಟ್ ಕೋ-ಆಪರೇಟಿವ್ ಸೊಸೈಟಿ ಮತ್ತು ವರ್ತಕ ಬಂಧು ಸಹಕಾರಿ ಸಂಘದ ಗೌರವ ಸಲಹೆಗಾರರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ಪಾಂಡವರಕಲ್ಲು ಸರಕಾರಿ ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿಯ (SDMC) ಮಾಜಿ ಅಧ್ಯಕ್ಷರಾಗಿ ಹಾಗೂ ಪಾಂಡವರಕಲ್ಲು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ಅಶ್ವತ್ಥ್ ಕುಮಾರ್ ಮುಖ್ಯಕಾರ್ಯನಿರ್ವಹಣಾಧಿಕಾರಿ M.Com, HDCM

ಶ್ರೀ ಅಶ್ವತ್ಥ್ ಕುಮಾರ್ M.Com, HDCM

ಹುದ್ದೆ: ಮುಖ್ಯಕಾರ್ಯನಿರ್ವಹಣಾಧಿಕಾರಿ

ಸಾಮಾಜಿಕ ಚಟುವಟಿಕೆಗಳು

“ಕಲಿಕೆಗಾಗಿ ಸಹಾಯ, ಸಹಾಯಕ್ಕಾಗಿ ಕಲಿಕೆ” ಕಾರ್ಯಕ್ರಮದಡಿ 3 ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪೂರ್ಣ ವೆಚ್ಚ, ಒಬ್ಬ ವೈದ್ಯಕೀಯ ವಿದ್ಯಾರ್ಥಿಯ ಆಂಶಿಕ ವೆಚ್ಚ ಮತ್ತು ಶ್ರೀ ಗುರುದೇವ ಕಾಲೇಜಿನ 150 ಪದವಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಮತ್ತು ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರ ಮಕ್ಕಳನ್ನು ವಾರ್ಷಿಕವಾಗಿ ಸನ್ಮಾನಿಸಲಾಗುತ್ತದೆ. ಸಾಮಾನ್ಯ, ಕ್ಯಾನ್ಸರ್, ಕಣ್ಣು, ದಂತ ಮತ್ತು ಎಲುಬು-ಕೀಲು ತಪಾಸಣೆಯ ಆರೋಗ್ಯ ಶಿಬಿರದಲ್ಲಿ 750 ಫಲಾನುಭವಿಗಳು ಭಾಗವಹಿಸಿದ್ದು, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ.

ಗುರು ಸಾನಿಧ್ಯ ಮತ್ತು ಆಸ್ತಿಗಳು

ಬೆಳ್ತಂಗಡಿಯಲ್ಲಿ ರೂ. 92 ಲಕ್ಷದ ನಿವೇಶನದಲ್ಲಿ ರೂ. 5.28 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಗುರು ಸಾನಿಧ್ಯ ವಾಣಿಜ್ಯ ಸಂಕೀರ್ಣವು 13-07-2024 ರಂದು ಉದ್ಘಾಟಿಸಲಾಯಿತು. ವಾಹನ ನಿಲುಗಡೆ, ಬಾಡಿಗೆ ಮಹಡಿಗಳು, ಕೇಂದ್ರ ಕಚೇರಿ, ಸಭಾಂಗಣ ಮತ್ತು 48 ಕಿಲೋವಾಟ್ ಸೌರ ಘಟಕವನ್ನು ಹೊಂದಿದೆ.

ಒದಗಿಸಿದ ವರದಿಯಲ್ಲಿ ಶಾಖಾ ಸ್ವಂತ ಆಸ್ತಿಗಳು, ಸ್ಥಿರಾಸ್ತಿ, ಪೀಠೋಪಕರಣ ಮತ್ತು ಇತರ ಆಸ್ತಿಗಳೂ ವಿವರಿಸಲಾಗಿದೆ. ಅಂಕಿಗಳನ್ನು ಅಧಿಕೃತ ವರದಿಯ ವರ್ಷ ಮತ್ತು ಘಟಕಗಳೊಂದಿಗೆ ಓದಬೇಕು.

ಹಣಕಾಸು ಸಾಧನೆ

2025-26ರವರೆಗಿನ ನವೀಕರಿಸಿದ ಹಣಕಾಸು ಅಂಕಿಗಳು.

ವಿವರ2016-172017-182018-192019-202020-212021-222022-232023-242024-252025-26
ಸದಸ್ಯತನ10,313.0013,000.0019,667.0022,747.0026,187.0028,273.0036,653.0041,709.0048,080.0051,293.00
ಪಾಲುವಂತಿಗೆ68.2068.45100.05134.38146.22162.19181.30199.36214.44248.02
ಠೇವಣಿ2,623.393,178.304,294.485,480.267,211.9410,388.9613,916.3918,878.2124,265.5232,634.70
ಹೊರಬಾಕಿ ಸಾಲ2,287.452,535.323,531.124,455.565,092.277,431.5111,313.9815,562.5520,487.7926,942.58
ವಿನಿಯೋಗಗಳು419.00732.00936.321,441.652,597.543,592.913,550.334,130.004,875.007,452.75
ಒಟ್ಟು ವ್ಯವಹಾರ16,271.0021,987.8734,480.7942,583.4342,666.1548,936.91104,796.13112,882.00140,479.00197,912.00
ಲಾಭ/ನಷ್ಟ90.1993.18110.42104.54114.15157.13225.93384.01484.15585.11
ಸಾಲ ವಸೂಲಾತಿ96.60%97.00%97.00%96.87%96.19%96.68%98.18%98.49%98.65%97.69%
ವರ್ಗೀಕರಣAAAAAAAAAA
ಲಾಭಾಂಶ ಹಂಚಿಕೆ12.00%12.00%15.00%15.00%15.00%15.00%15.00%15.00%15.00%15.00%

ಸಂಘಕ್ಕೆ ಸಂದ ಪ್ರಶಸ್ತಿಗಳು

ಅಂತಿಮ ಪ್ರಕಟಣೆಗೆ ಮೊದಲು ಪ್ರಶಸ್ತಿ ಹೆಸರುಗಳನ್ನು ಪ್ರಮಾಣಪತ್ರಗಳೊಂದಿಗೆ ಪರಿಶೀಲಿಸಿ.

  • ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ
  • 2023ರ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
  • ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ 8 ವರ್ಷ ಸಾಧನ ಶ್ರೀ ಪ್ರಶಸ್ತಿ
  • 2015-16ರಲ್ಲಿ ಇ-ಸ್ಟಾಂಪಿಂಗ್ ವಿತರಣೆಯಲ್ಲಿ ದ್ವಿತೀಯ ಸ್ಥಾನ
  • ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಸಾಧನ ಪ್ರಶಸ್ತಿ
  • ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ವತಿಯಿಂದ ಸಾಧನಾ ಶ್ರೇಷ್ಠ ಪ್ರಶಸ್ತಿ
  • ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯಿಂದ ಬ್ರಹ್ಮಶ್ರೀ ಸಹಕಾರ ಸಾಧನಶ್ರೀ ಪ್ರಶಸ್ತಿ
  • ಜೆಸಿಐ ಬೆಳ್ತಂಗಡಿಯಿಂದ ಸೇವಾ ಶ್ರೀ ಪ್ರಶಸ್ತಿ